Search This Blog

Thursday, 23 July 2020

Bagila Terediruve Taaye poojege kaadiruve Lyrics ಬಾಗಿಲ ತೆರೆದಿರುವೆ ತಾಯೇ ಪೂಜೆಗೆ ಕಾದಿರುವೆ

ಬಾಗಿಲ ತೆರೆದಿರುವೆ ತಾಯೇ ಪೂಜೆಗೆ ಕಾದಿರುವೆ

ಹಾಡು:ಬಾಗಿಲ ತೆರೆದಿರುವೆ ತಾಯೇ ಪೂಜೆಗೆ ಕಾದಿರುವೆ / bagila terediruve taaye
ಚಿತ್ರ : ಪ್ರೇಮಾನುಬಂಧ / premanubhanda
ಸಾಹಿತ್ಯ : ಚಿ।ಉದಯ್ ಶಂಕರ್
ಸಂಗೀತ : ರಾಜನ್ ನಾಗೇಂದ್ರ
ಹಾಡಿದವರು : ಎಸ್ . ಜಾನಕಿ

 ಅ...ಽಅ...ಽ....
 ಅ...ಽಅ...ಽ....
 ಅ...ಽಅ...ಽ....

ಬಾಗಿಲ ತೆರೆದಿರುವೆ ತಾಯೇ ಪೂಜೆಗೆ ಕಾದಿರುವೆ
ಬಾಗಿಲ ತೆರೆದಿರುವೆ ತಾಯೇ ಪೂಜೆಗೆ ಕಾದಿರುವೆ..ಎ...ಎ...
ಸೇವೆಯ  ಸ್ವೀಕರಿಸು ಬಾ.ಽ... ಭಾಗ್ಯಲಕ್ಷ್ಮಿಯೇ..ಎ..
ಸೇವೆಯ  ಸ್ವೀಕರಿಸು ಬಾ.... ಭಾಗ್ಯಲಕ್ಷ್ಮಿಯೇ..
ಬಾಗಿಲ ತೆರೆದಿರುವೆ ತಾಯೇ ಪೂಜೆಗೆ ಕಾದಿರುವೆ..ಎ...ಎ...

ಹೊಸಲಿನ ಪೂಜೆ ಮಾಡಿದೆಯಮ್ಮ..
ಹಸಿರು ತೋರಣ.ಽ.. ಕಟ್ಟಿದೆಯಮ್ಮ..

ಅ..ಽ...ಽ....
ಅ...ಽ..ಽ....

ತುಪ್ಪದ ದೀಪ ಬೆಳಗಿದೆಯಮ್ಮ
ಮಲ್ಲಿಗೆ ಮಾಲೆ ಕಾದಿದೆಯಮ್ಮ
ಕಮಲಾಕ್ಷಿ ಕಮಲಮುಖಿ ಕಮಲೋದ್ಭವೇ ಬಾರೆ..

ಬಾಗಿಲ ತೆರೆದಿರುವೆ ತಾಯೇ ಪೂಜೆಗೆ ಕಾದಿರುವೆ..ಎ...ಎ...

ನೀನು ಬರುವಾಗ ಹೊನ್ನಕಾಲ್ಗೆಜ್ಜೆ ನಾದ ನಾ ಕೇಳುವಂತೆ..ಎ...ಎ...
ನಿನ್ನ ನಗೆಯಿಂದ ನನ್ನ ಭಯವೆಲ್ಲಾ ಓಡಿ ಮರೆಯಾಗುವಂತೆ..ಎ...ಎ...
ಮನೆಯು ಬೆಳಕಾಗಿ, ಮನವು ಬೆಳಕಾಗಿ, ಬಾಳು ಬೆಳಕಾಗುವಂತೆ..ಎ...ಎ...
ದಯಮಾಡಿಸು..ಉ... ನಾರಾಯಣನ ಹೃದಯೇಶ್ವರಿಯೇ..ಎ...

ಬಾಗಿಲ ತೆರೆದಿರುವೆ ತಾಯೇ ಪೂಜೆಗೆ ಕಾದಿರುವೆ..ಎ...ಎ...

ನಿನ್ನ ಮನೆಯಿಂದ ನಿನ್ನ ಗುಡಿಯಿಂದ ಬಂದು ಸ್ಥಿರವಾಗಿ ನೆಲೆಸು..ಉ...
ಬಂದ ಕ್ಷಣದಿಂದ ತಂದ ಸುಖ-ಶಾಂತಿ ನಮ್ಮ ಬದುಕಲ್ಲಿ ಬೆರೆಸು..ಉ..ಉ...
ನಿತ್ಯ ಹರಿಪೂಜೆ ನಿತ್ಯ ಗುರುಸೇವೆ ಇಲ್ಲಿ ನಡೆವಂತೆ ಹರಸು..ಉ..ಉ...
ದಯೆ ತೋರಿಸು ಶರಣೆನ್ನುವೆ ಸೌಭಾಗ್ಯದ ನಿಧಿಯೇ..

ಬಾಗಿಲ ತೆರೆದಿರುವೆ ತಾಯೇ ಪೂಜೆಗೆ ಕಾದಿರುವೆ..ಎ...ಎ...
ಸೇವೆಯ  ಸ್ವೀಕರಿಸು ಬಾ.ಽ... ಭಾಗ್ಯಲಕ್ಷ್ಮಿಯೇ..ಎ..
ಸೇವೆಯ  ಸ್ವೀಕರಿಸು ಬಾ.... ಭಾಗ್ಯಲಕ್ಷ್ಮಿಯೇ..
ಬಾಗಿಲ ತೆರೆದಿರುವೆ ತಾಯೇ ಪೂಜೆಗೆ ಕಾದಿರುವೆ..ಎ...ಎ...

No comments:

Post a Comment