ಕಂಗಳಿಗೆ ಕಾಣಿಸದೆ ಎಲ್ಲಿ ಮರೆಯಾಗಿರುವ ಸಿರಿವಂತರ ಸೆರೆಯ ತೊರೆದು ಬಾರಮ್ಮ...||2||
ಮಲ್ಲಿಗೆಯ ಮಂಟಪದಿ ನಿನ್ನ ಪೂಜಿಸುವೆ
ಸುರಲೋಕದ ಪಾರಿಜಾತ ಅರ್ಪಿಸುವೆ
ಪನ್ನೀರ ಕೊಳದಿಂದ ಹೊನ್ನ ತಾವರೆ ತಂದು
ಸಿರಿ ಪಾದಕಮಲಗಳಿಗೆ ಪೂಜಿಸುವೆ
ಧನಲಕ್ಷ್ಮಿ ದಯೆ ತೋರು ಬಾಮ್ಮಾಅಮ್ಮ ಸೌಭಾಗ್ಯಲಕ್ಷ್ಮಿ ನೀ ಬಾರಮ್ಮ
ಸನ್ನಿಧಿಗೆ ಬೇಗ ನೀ ದಾರಿ ತೋರಮ್ಮ
ದಿವ್ಯ ದರುಶನ ನೀಡಿ ಒಲಿದು ಬಾರಮ್ಮ
ಬಾಗಿಲಿಗೆ ಬಂದಿರುವ ಭಕುತರ ಬೇಡಿಕೆಯ
ತರತರದಿ ಪೂರೈಸಿ ಬೇಗ ಸಲಹಮ್ಮ
ಧನಲಕ್ಷ್ಮಿ ದಯೆ ತೋರು ಬಾಮ್ಮಾಅಮ್ಮ ಸೌಭಾಗ್ಯಲಕ್ಷ್ಮಿ ನೀ ಬಾರಮ್ಮ
ಕಂಗಳಿಗೆ ಕಾಣಿಸದೆ ಎಲ್ಲಿ ಮರೆಯಾಗಿರುವ ಸಿರಿವಂತರ ಸೆರೆಯ ತೊರೆದು ಬಾರಮ್ಮ..
No comments:
Post a Comment