Search This Blog

Thursday, 2 July 2020

Nodu Nodu Kannara Nintihalu Song Lyrics In Kannada ನೋಡು ನೋಡು ಕಣ್ಣಾರ ನಿಂತಿಹಳು ನಗು ನಗುತ್ತಾ ಚಾಮುಂಡಿ ನಿಂತಿಹಳು

 Nodu Nodu Kannara Nintihalu Song Lyrics In Kannada ನೋಡು ನೋಡು ಕಣ್ಣಾರ ನಿಂತಿಹಳು ನಗು ನಗುತ್ತಾ ಚಾಮುಂಡಿ ನಿಂತಿಹಳು


ನೋಡು ನೋಡು ಕಣ್ಣಾರ ನಿಂತಿಹಳು 
ನಗು ನಗುತ್ತಾ ಚಾಮುಂಡಿ ನಿಂತಿಹಳು
ತಾಯಿ ಹೃದಯ ತಂದ ತುಂಬು 
ಮಮತೆಯಿಂದ ಬಾ ಇಲ್ಲಿ ಓ ಕಂದ ಏನುತಿಹಳು
ಕೈಬೀಸಿ ಬಳಿಗೆ ನಮ್ಮ ಕರೆದಿಹಳು

ನೋಡು ನೋಡು ಕಣ್ಣಾರ ನಿಂತಿಹಳು 
ನಗು ನಗುತ್ತಾ ಚಾಮುಂಡಿ ನಿಂತಿಹಳು

ಮೈಸೂರು ನಗರದ ಬೆಟ್ಟದ ಮೇಲೆ 
ಮಹಿಷಾಸುರ ಶೋಧನೆ ವೈಭವ ಲೀಲೆ
ಧನುಜ ಸಂಭಾಲಿನಿ ತ್ರಿಭುವನ ಪೋಷಿಣಿ
ಶಂಕರನ ರಾಣಿ ಜೀವ ಹೂವುಗಳ ಮಾಲೆ

ನೋಡು ನೋಡು ಕಣ್ಣಾರ ನಿಂತಿಹಳು 
ನಗು ನಗುತ್ತಾ ಚಾಮುಂಡಿ ನಿಂತಿಹಳು 

ನಂಬಿರುವ ಭಕ್ತರ ರಕ್ಷೆಗಾಗಿ 
ನಂಬದಿಹ ದುಷ್ಟರ ಶಿಕ್ಷೆಗಾಗಿ
ನಿಂತಿಹಳು ನೋಡಲ್ಲಿ ಶೂಲಪಾಣಿ ಯಾಗಿ
ಕರುನಾಡ ಮಕ್ಕಳ ಹಿರಿ ದೈವವಾಗಿ

ನೋಡು ನೋಡು ಕಣ್ಣಾರ ನಿಂತಿಹಳು 
ನಗು ನಗುತ್ತಾ ಚಾಮುಂಡಿ ನಿಂತಿಹಳು 

ಉಕ್ಕಿ ಬರುವ ನದಿಯಲ್ಲಿ ಅವಳ ನಗೆ
ಬೀಸಿ ಬರುವ ಗಾಳಿಯಲ್ಲಿ ಅವಳುಸಿರ
ಹಸಿ ಹಸಿರು ಪೈರು ಗಳೇ ಅವಳು ಉಡುಗೆ
ಆತ ಈ ರೂಪವು ಹಲವು ಬಗ್ಗೆ

ನೋಡು ನೋಡು ಕಣ್ಣಾರ ನಿಂತಿಹಳು 
ನಗು ನಗುತ್ತಾ ಚಾಮುಂಡಿ ನಿಂತಿಹಳು
ತಾಯಿ ಹೃದಯ ತಂದ ತುಂಬು 
ಮಮತೆಯಿಂದ ಬಾ ಇಲ್ಲಿ ಓ ಕಂದ ಏನುತಿಹಳು
ಕೈಬೀಸಿ ಬಳಿಗೆ ನಮ್ಮ ಕರೆದಿಹಳು

No comments:

Post a Comment