Mahalakshmi Manege Baaramma Lyrics in Kannada | ಮಹಾಲಕ್ಷ್ಮಿ ಮನೆಗೆ ಬಾರಮ್ಮ
ಮಹಾಲಕ್ಷ್ಮಿ ಮನೆಗೆ ಬಾರಮ್ಮ ನಮ್ಮ ಪ್ರೆಮದಿಂದೊಮ್ಮೆ ನೊಡಮ್ಮ
ಶುಕ್ರವಾರದ ಪೂಜಾ ಸಮಯವು ನೀ ಬರದೆ
ಸುಖ ಶಾಂತಿಯ ಕಾಣೆವು ||2||
ನಿನ್ನ ಕಂಗಳ ಚಂದ್ರಿಕೆಯಲ್ಲಿ ನಲಿಯುವ
ಭಾಗ್ಯವ ನೀ ತರಲಾರೆಯ....
ನಿನ್ನ ಕಾಲ್ಗಳ ಗೆಜ್ಜೆಯ ನಾದಕ್ಕೆ ಕುಣಿಯುವ
ಯೋಗವು ನೀ ಕೊಡಲಾರೆ....
ಈ ಮನೆಯಲ್ಲಿ ಶಾಶ್ವತವಾಗಿ ನೆಲೆಸಿ ನಮ್ಮನ್ನು ಹರಸಮ್ಮ.....
ಮಹಾಲಕ್ಷ್ಮಿ ಮನೆಗೆ ಬಾರಮ್ಮ ನಮ್ಮ ಪ್ರೆಮದಿಂದೊಮ್ಮೆ ನೊಡಮ್ಮ
ಶುಕ್ರವಾರದ ಪೂಜಾ ಸಮಯವು ನೀ ಬರದೆ
ಸುಖ ಶಾಂತಿಯ ಕಾಣೆವು
ನಿನ್ನ ಕರುಣೆ ಮನಕಾನಂದವು
ನಿನ್ನ ಸ್ಮರಣೆ ಬಾಳಿನ ದೀಪವು
ನೀನಿರುವ ಮನೆ ಭೂವೈಕುಂಠವು
ನೀನೊಲಿದ ಆಗಲೇ ಸಿರಿ ಸೌಭಾಗ್ಯವು
ನಂಬಿಹೆ ನಿನ್ನ ಕರವನು ಹಿಡಿದು
ಅಮ್ಮ ನಮ್ಮನ್ನು ನಡೆಸಮ್ಮ....
ಮಹಾಲಕ್ಷ್ಮಿ ಮನೆಗೆ ಬಾರಮ್ಮ ನಮ್ಮ ಪ್ರೆಮದಿಂದೊಮ್ಮೆ ನೊಡಮ್ಮ
ಶುಕ್ರವಾರದ ಪೂಜಾ ಸಮಯವು ನೀ ಬರದೆ
ಸುಖ ಶಾಂತಿಯ ಕಾಣೆವು
No comments:
Post a Comment