Search This Blog

Showing posts sorted by date for query ಮಹಗಣಪತೆ ಮಾತಂಗವದನ ಮೂಷಿಕವಾಹನ ಮಂಗಳಚರಣ.. Sort by relevance Show all posts
Showing posts sorted by date for query ಮಹಗಣಪತೆ ಮಾತಂಗವದನ ಮೂಷಿಕವಾಹನ ಮಂಗಳಚರಣ.. Sort by relevance Show all posts

Thursday, 21 July 2016

Maha Ganapate MaatangaVadana ಮಹಗಣಪತೆ ಮಾತಂಗವದನ ಮೂಷಿಕವಾಹನ ಮಂಗಳಚರಣ

Maha Ganapate MaatangaVadana  ಮಹಗಣಪತೆ ಮಾತಂಗವದನ ಮೂಷಿಕವಾಹನ ಮಂಗಳಚರಣ

ಮಹಾಗಣಪತೇ ಮಾತಂಗವದನ
ಮೂಷಿಕವಾಹನ ಮಂಗಳಚರಣ ||।।

ವಿನಾಯಕ ನೀ ವಿಘ್ನಕೋಟಿ ಹರಣ
ವಾಮನರೂಪ ವಲ್ಲಭನೇ
ಷಣ್ಮುಖಸೋದರ ಸುರಮುನಿಪೂಜಿತ
ಶರಣೆಂಬೆ ನಿನಗೆ ಶಂಭುಕುಮಾರ ||||

ಲಂಬೋದರನೇ ಲಕುಮೀಕರನೇ
ಅಂಬಾಸುತನೇ ಆದಿಪೂಜ್ಯನೇ
ದಶಭುಜರೂಪನೆ ದೂರ್ವಾಪ್ರಿಯನೆ
ದುರಿತನಿವಾರಣ ದೀನರಕ್ಷಣ ||||

ಪಾಶಾಂಕುಶಧರ ಪಾಪವಿಮೋಚನ
ಪಾವನಸ್ಮರಣ ಪತಿತಪಾವನ
ಜಗದೊಳು ನಿನ್ನಯ ನಾಮವ ಪೊಗಳುವೆ
ಜಯರಾಮ ವಿಠ್ಠಲಗೆ ನೀ ಅತಿಪ್ರಿಯನೆ ||||

ಮಹಾಗಣಪತೇ ಮಾತಂಗವದನ
ಮೂಷಿಕವಾಹನ ಮಂಗಳಚರಣ.