Search This Blog

Wednesday 8 July 2020

ಜೈ ಗಣೇಶ ಜೈ ಗಣೇಶ ಜೈ ಗಣೇಶ ದೇವ

ಜೈ ಗಣೇಶ ಜೈ ಗಣೇಶ ಜೈ ಗಣೇಶ ದೇವ
ಮತ ಜಾಕಿ ಪಾರ್ವತಿ ಪಿತ ಮಹಾದೇವ ||2||

ಏಕದಂತ ದಯಾವಂತ ಚಾರ್ ಭುಜದಾರಿ
ಮಾತೆ ಪರ್ ತಿಲಕ್ ಸೊಯ್ ಮೂಷಕ ಸವಾರಿ
ಪಾನ್ ಚಡೆ ಫೂಲ್ ಚಡೆ ಅವ್ರ್ ಚಡೆ ಮೇವ
ಲಡ್ಡಒನ ಕಾ ಭೋಗ ಲಗ್ಗೆ ಸಂತು ಕರೆ ಸೇವಾ

ಜೈ ಗಣೇಶ ಜೈ ಗಣೇಶ ಜೈ ಗಣೇಶ ದೇವ
ಮತ ಜಾಕಿ ಪಾರ್ವತಿ ಪಿತ ಮಹಾದೇವ

ಅಂದೇಕೋ ಆಕ್ ದೇತ ಕೋಡಿನ ಕೋ ಕಾಯ
ಬಾಂಜನ ಕೊ ಪುತ್ರ ದೇತ ನೀರಧನ ಕೋ ಮಾಯ
ಸೂರ್ಯ ಶಾಮ್ ಶರಣ ಆಎ  ಸಕಲ ಕಿಜೋ ಸೇವಾ
ಜೈ ಗಣೇಶ ಜೈ ಗಣೇಶ ಜೈ ಗಣೇಶ ದೇವ.

ಜೈ ಗಣೇಶ ಜೈ ಗಣೇಶ ಜೈ ಗಣೇಶ ದೇವ
ಮತ ಜಾಕಿ ಪಾರ್ವತಿ ಪಿತ ಮಹಾದೇವ



Thursday 2 July 2020

Mahalakshmi Manege Baaramma Lyrics in Kannada | ಮಹಾಲಕ್ಷ್ಮಿ ಮನೆಗೆ ಬಾರಮ್ಮ

Mahalakshmi Manege Baaramma Lyrics in Kannada | ಮಹಾಲಕ್ಷ್ಮಿ ಮನೆಗೆ ಬಾರಮ್ಮ

ಮಹಾಲಕ್ಷ್ಮಿ ಮನೆಗೆ ಬಾರಮ್ಮ ನಮ್ಮ ಪ್ರೆಮದಿಂದೊಮ್ಮೆ ನೊಡಮ್ಮ
ಶುಕ್ರವಾರದ ಪೂಜಾ ಸಮಯವು ನೀ ಬರದೆ 
ಸುಖ ಶಾಂತಿಯ ಕಾಣೆವು ||2||

ನಿನ್ನ ಕಂಗಳ ಚಂದ್ರಿಕೆಯಲ್ಲಿ ನಲಿಯುವ 
ಭಾಗ್ಯವ ನೀ ತರಲಾರೆಯ....
ನಿನ್ನ ಕಾಲ್ಗಳ ಗೆಜ್ಜೆಯ ನಾದಕ್ಕೆ ಕುಣಿಯುವ
ಯೋಗವು ನೀ ಕೊಡಲಾರೆ....
ಈ ಮನೆಯಲ್ಲಿ ಶಾಶ್ವತವಾಗಿ ನೆಲೆಸಿ ನಮ್ಮನ್ನು ಹರಸಮ್ಮ.....

ಮಹಾಲಕ್ಷ್ಮಿ ಮನೆಗೆ ಬಾರಮ್ಮ ನಮ್ಮ ಪ್ರೆಮದಿಂದೊಮ್ಮೆ ನೊಡಮ್ಮ
ಶುಕ್ರವಾರದ ಪೂಜಾ ಸಮಯವು ನೀ ಬರದೆ 
ಸುಖ ಶಾಂತಿಯ ಕಾಣೆವು

ನಿನ್ನ ಕರುಣೆ ಮನಕಾನಂದವು 
ನಿನ್ನ ಸ್ಮರಣೆ ಬಾಳಿನ ದೀಪವು
ನೀನಿರುವ ಮನೆ ಭೂವೈಕುಂಠವು
ನೀನೊಲಿದ ಆಗಲೇ ಸಿರಿ ಸೌಭಾಗ್ಯವು
ನಂಬಿಹೆ ನಿನ್ನ ಕರವನು ಹಿಡಿದು
ಅಮ್ಮ ನಮ್ಮನ್ನು ನಡೆಸಮ್ಮ....

ಮಹಾಲಕ್ಷ್ಮಿ ಮನೆಗೆ ಬಾರಮ್ಮ ನಮ್ಮ ಪ್ರೆಮದಿಂದೊಮ್ಮೆ ನೊಡಮ್ಮ
ಶುಕ್ರವಾರದ ಪೂಜಾ ಸಮಯವು ನೀ ಬರದೆ 
ಸುಖ ಶಾಂತಿಯ ಕಾಣೆವು

Nodu Nodu Kannara Nintihalu Song Lyrics In Kannada ನೋಡು ನೋಡು ಕಣ್ಣಾರ ನಿಂತಿಹಳು ನಗು ನಗುತ್ತಾ ಚಾಮುಂಡಿ ನಿಂತಿಹಳು

 Nodu Nodu Kannara Nintihalu Song Lyrics In Kannada ನೋಡು ನೋಡು ಕಣ್ಣಾರ ನಿಂತಿಹಳು ನಗು ನಗುತ್ತಾ ಚಾಮುಂಡಿ ನಿಂತಿಹಳು


ನೋಡು ನೋಡು ಕಣ್ಣಾರ ನಿಂತಿಹಳು 
ನಗು ನಗುತ್ತಾ ಚಾಮುಂಡಿ ನಿಂತಿಹಳು
ತಾಯಿ ಹೃದಯ ತಂದ ತುಂಬು 
ಮಮತೆಯಿಂದ ಬಾ ಇಲ್ಲಿ ಓ ಕಂದ ಏನುತಿಹಳು
ಕೈಬೀಸಿ ಬಳಿಗೆ ನಮ್ಮ ಕರೆದಿಹಳು

ನೋಡು ನೋಡು ಕಣ್ಣಾರ ನಿಂತಿಹಳು 
ನಗು ನಗುತ್ತಾ ಚಾಮುಂಡಿ ನಿಂತಿಹಳು

ಮೈಸೂರು ನಗರದ ಬೆಟ್ಟದ ಮೇಲೆ 
ಮಹಿಷಾಸುರ ಶೋಧನೆ ವೈಭವ ಲೀಲೆ
ಧನುಜ ಸಂಭಾಲಿನಿ ತ್ರಿಭುವನ ಪೋಷಿಣಿ
ಶಂಕರನ ರಾಣಿ ಜೀವ ಹೂವುಗಳ ಮಾಲೆ

ನೋಡು ನೋಡು ಕಣ್ಣಾರ ನಿಂತಿಹಳು 
ನಗು ನಗುತ್ತಾ ಚಾಮುಂಡಿ ನಿಂತಿಹಳು 

ನಂಬಿರುವ ಭಕ್ತರ ರಕ್ಷೆಗಾಗಿ 
ನಂಬದಿಹ ದುಷ್ಟರ ಶಿಕ್ಷೆಗಾಗಿ
ನಿಂತಿಹಳು ನೋಡಲ್ಲಿ ಶೂಲಪಾಣಿ ಯಾಗಿ
ಕರುನಾಡ ಮಕ್ಕಳ ಹಿರಿ ದೈವವಾಗಿ

ನೋಡು ನೋಡು ಕಣ್ಣಾರ ನಿಂತಿಹಳು 
ನಗು ನಗುತ್ತಾ ಚಾಮುಂಡಿ ನಿಂತಿಹಳು 

ಉಕ್ಕಿ ಬರುವ ನದಿಯಲ್ಲಿ ಅವಳ ನಗೆ
ಬೀಸಿ ಬರುವ ಗಾಳಿಯಲ್ಲಿ ಅವಳುಸಿರ
ಹಸಿ ಹಸಿರು ಪೈರು ಗಳೇ ಅವಳು ಉಡುಗೆ
ಆತ ಈ ರೂಪವು ಹಲವು ಬಗ್ಗೆ

ನೋಡು ನೋಡು ಕಣ್ಣಾರ ನಿಂತಿಹಳು 
ನಗು ನಗುತ್ತಾ ಚಾಮುಂಡಿ ನಿಂತಿಹಳು
ತಾಯಿ ಹೃದಯ ತಂದ ತುಂಬು 
ಮಮತೆಯಿಂದ ಬಾ ಇಲ್ಲಿ ಓ ಕಂದ ಏನುತಿಹಳು
ಕೈಬೀಸಿ ಬಳಿಗೆ ನಮ್ಮ ಕರೆದಿಹಳು

Wednesday 1 July 2020

Dhana Lakshmi Daye Tori Baramma Song Lyrics in Kannada | ಧನಲಕ್ಷ್ಮಿ ದಯೆ ತೋರು ಬಾಮ್ಮಾಅಮ್ಮ ಸೌಭಾಗ್ಯಲಕ್ಷ್ಮಿ ನೀ ಬಾರಮ್ಮ

ಧನಲಕ್ಷ್ಮಿ ದಯೆ ತೋರು ಬಾಮ್ಮಾಅಮ್ಮ ಸೌಭಾಗ್ಯಲಕ್ಷ್ಮಿ ನೀ ಬಾರಮ್ಮ
ಕಂಗಳಿಗೆ ಕಾಣಿಸದೆ ಎಲ್ಲಿ ಮರೆಯಾಗಿರುವ ಸಿರಿವಂತರ ಸೆರೆಯ ತೊರೆದು ಬಾರಮ್ಮ...||2||

ಮಲ್ಲಿಗೆಯ ಮಂಟಪದಿ ನಿನ್ನ ಪೂಜಿಸುವೆ
ಸುರಲೋಕದ ಪಾರಿಜಾತ ಅರ್ಪಿಸುವೆ
ಪನ್ನೀರ ಕೊಳದಿಂದ ಹೊನ್ನ ತಾವರೆ ತಂದು
ಸಿರಿ ಪಾದಕಮಲಗಳಿಗೆ ಪೂಜಿಸುವೆ

ಧನಲಕ್ಷ್ಮಿ ದಯೆ ತೋರು ಬಾಮ್ಮಾಅಮ್ಮ ಸೌಭಾಗ್ಯಲಕ್ಷ್ಮಿ ನೀ ಬಾರಮ್ಮ

ಸನ್ನಿಧಿಗೆ ಬೇಗ ನೀ ದಾರಿ ತೋರಮ್ಮ 
ದಿವ್ಯ ದರುಶನ ನೀಡಿ ಒಲಿದು ಬಾರಮ್ಮ
ಬಾಗಿಲಿಗೆ ಬಂದಿರುವ ಭಕುತರ ಬೇಡಿಕೆಯ
ತರತರದಿ ಪೂರೈಸಿ ಬೇಗ ಸಲಹಮ್ಮ

ಧನಲಕ್ಷ್ಮಿ ದಯೆ ತೋರು ಬಾಮ್ಮಾಅಮ್ಮ ಸೌಭಾಗ್ಯಲಕ್ಷ್ಮಿ ನೀ ಬಾರಮ್ಮ
ಕಂಗಳಿಗೆ ಕಾಣಿಸದೆ ಎಲ್ಲಿ ಮರೆಯಾಗಿರುವ ಸಿರಿವಂತರ ಸೆರೆಯ ತೊರೆದು ಬಾರಮ್ಮ..

Kamalada Mogadole Kamalada Kannole Lyrics in Kannada | ಕಮಲದ ಮೊಗದೊಳೆ ಕಮಲದ ಕಣ್ಣೋಳೆ ಲಿರಿಕ್ಸ್

ಕಮಲದ ಮೊಗದೊಳೆ 
ಕಮಲದ ಕಣ್ಣೋಳೆ
ಕಮಲವ ಕೈಯಲ್ಲಿ ಹಿಡಿದೊಳೆ
ಕಮಲನಾಭನ ಹೃದಯ
ಕಮಲದಲಿ ನಿಂತವಳೇ 
ಕಮಲೇ ನಾ ಕರಮುಗಿವೆ ಬಾಮ್ಮ 
ಪೂಜೆಯ ಸ್ವೀಕರಿಸಿ ದಯೆ ತೋರಿಸಮ್ಮ ||2||

ಕಾವೇರಿ ನೀರ ಅಭಿಷೇಕಕ್ಕಾಗಿ ನಿನಗಾಗಿ ನಾ ತಂದೆ ನಮ್ಮ
ಕಂಪನ್ನು ಚೆಲ್ಲೊ ಸುಮರಾಶಿಲಿಂದೆ ಹೂಮಾಲೆ ಕಟ್ಟಿರುವೆ ನಮ್ಮ
ಬಂಗಾರ ಕಾಲ್ಗೆಜ್ಜೆ ನಾದ ನಮ್ಮ ಮನೆಯಲ್ಲ ಬಾ ತುಂಬುವಂತೆ
ಕುಣಿಯುತ... ನಲಿಯುತ... ಒಲಿದು ಬಾ... ನಮ್ಮ ಮನೆಗೆ ಬಾ...

ಕಮಲದ ಮೊಗದೊಳೆ 
ಕಮಲದ ಕಣ್ಣೋಳೆ
ಕಮಲವ ಕೈಯಲ್ಲಿ ಹಿಡಿದೊಳೆ

ಶ್ರೀದೇವಿ ಬಾಅಮ್ಮ ಧನಲಕ್ಷ್ಮಿ ಬಾಅಮ್ಮ ಮನೆಯನ್ನು ಬೆಳಕಾಗಿ ಮಾಡು.....
ದಯತೋರಿ ಬಂದು ಮನಸ್ಸಲ್ಲಿ ನಿಂತು ಸಂತೋಷ ಸೌಭಾಗ್ಯ ನೀಡು...
ಸ್ಥಿರವಾಗಿ ಬಂದಿಲ್ಲಿ ನೆಲೆಸು ತಾಯಿ        ವರಮಹಾಲಕ್ಷ್ಮಿಯೆ ಹರಸು.....
ಕರವನು ಮುಗಿಯುವೆ ಆರತಿ ಈಗ ಬೆಳಗುವೆ.

ಕಮಲದ ಮೊಗದೊಳೆ 
ಕಮಲದ ಕಣ್ಣೋಳೆ
ಕಮಲವ ಕೈಯಲ್ಲಿ ಹಿಡಿದೊಳೆ
ಕಮಲನಾಭನ ಹೃದಯ
ಕಮಲದಲಿ ನಿಂತವಳೇ 
ಕಮಲೇ ನಾ ಕರಮುಗಿವೆ ಬಾಮ್ಮ 
ಪೂಜೆಯ ಸ್ವೀಕರಿಸಿ ದಯೆ ತೋರಿಸಮ್ಮ ||2||

Tuesday 30 June 2020

Gajamukhane Ganapatiye Song Lyrics In Kannada ಗಜಮುಖನೆ ಗಣಪತಿಯೇ ನಿನಗೆ ವಂದನೆ

ಗಜಮುಖನೆ ಗಣಪತಿಯೇ ನಿನಗೆ ವಂದನೆ ಲಿರಿಕ್ಸ್

ಗಜಮುಖನೆ ಗಣಪತಿಯೇ ನಿನಗೆ ವಂದನೆ ನಂಬಿದವರ ಪಾಲಿನ ಕಲ್ಪತರು ನೀನೆ ||2||

ಭಾದ್ರಪದ ಶುಕ್ಲದ ಚೌತಿಯಂದು ನೀ ಮನೆಮನೆಗೂ ದಯಮಾಡಿ ಹರಸು ಎಂದು 
ನಿನ್ನ ಸನ್ನಿಧಾನಕ್ಕೆ ತಲೆಬಾಗಿ ಕೈಯ್ಯಮುಗಿದು ಬೇಡುವಾ ಭಕ್ತರಿಗೆ ನೀ ದಯಾಸಿಂಧು

ಗಜಮುಖನೆ ಗಣಪತಿಯೇ ನಿನಗೆ ವಂದನೆ ನಂಬಿದವರ ಪಾಲಿನ ಕಲ್ಪತರು ನೀನೆ....

ಪಾರ್ವತಿ ಪರಶಿವನ ಪ್ರೇಮ ಪುತ್ರನೆ ಪಾಲಿಸುವ ಪರದೈವ ಬೇರೆ ಕಾಣೆ
ಪಾಪದ ಪಂಕದಲಿ ಪದುಮ ಎನಿಸು ಎನ್ನ ಪಾದ ಸೇವೆಯೊಂದೇ ಜನ್ಮ ಸಾಧನ

ಗಜಮುಖನೆ ಗಣಪತಿಯೇ ನಿನಗೆ ವಂದನೆ ನಂಬಿದವರ ಪಾಲಿನ ಕಲ್ಪತರು ನೀನೆ....

ಈರೇಳು ಲೋಕದ ಅನು ಅನುವಿನ ಇಹಪರದ ಸಾಧನೆಗೆ ಕಾರಣ
ನಿನ್ನೊಲುಮೆ ನೋಟದ ಒಂದು ಹೊನ್ನ ಕಿರಣ ನೀಡಿದರೆ ಸಾಕಯ್ಯ ಜನ್ಮ ಪಾವನ

ಗಜಮುಖನೆ ಗಣಪತಿಯೇ ನಿನಗೆ ವಂದನೆ ನಂಬಿದವರ ಪಾಲಿನ ಕಲ್ಪತರು ನೀನೆ ||2||

Nine Aanadi Nanenu Bedali Shambhulinga Song Lyrics in Kannada | ನೀನೆ ಅನಾದಿ ನಾನೇನು ಬೇಡಲಿ ಶಂಭುಲಿಂಗ

ನೀನೆ ಅನಾದಿ ನಾನೇನು ಬೇಡಲಿ ಶಂಭುಲಿಂಗ Lyrics in kannada.


ನೀನೆ ಅನಾದಿ ನಾನೇನು ಬೇಡಲಿ ಶಂಭುಲಿಂಗ ಮಾನವ ಜನ್ಮಕ್ಕೆ ಬಂದು ಏನೇನು ತಿಳಿಯಲಿಲ್ಲ ಶಂಭುಲಿಂಗ ||2||

ಹಾವು ಹರಿದಾಡಿತ್ತು ಚೇಳು ಕುಣಿದಾಡಿತು ಶಂಭುಲಿಂಗ 
ಹಾವು ಚೇಳನ್ನು ನುಂಗಿ ಕೋಳಿಯು ಕೂಗುವುದು ಶಂಭುಲಿಂಗ

ಮಾಯೆ ಎಂಬುದು ಮನೆ ಮಾಡಿತು ದೇಹದೊಳು ಶಂಭುಲಿಂಗ 
ಮಾಯಾ ಇನ್ನಾವ ಕಾಲಕ್ಕೆ ಪರಿಹಾರವಾಗುವುದು ಶಂಭುಲಿಂಗ

ರೆಕ್ಕೆ ಇಲ್ಲದ ಪಕ್ಷಿ ಗಗನದೊಳು ಹಾರಿತು ಶಂಭುಲಿಂಗ
ಅಕ್ಕರದಲ್ಲಿ ಶಿವ ನೋಡಿ ತಾ ನಗುತಿಹನು ಶಂಭುಲಿಂಗ

ಕಲ್ಲು ದೇವರು ಕಣ್ಣು-ಮುಚ್ಚಿ ಕಾಪಾಡಿದರು ಶಂಭುಲಿಂಗ
ಬಲ್ಲಿದ ಶಿಶುನಾಳಧೀಶನ ದಯದಿಂದ ಶಂಭುಲಿಂಗ