ಕಮಲದ ಕಣ್ಣೋಳೆ
ಕಮಲವ ಕೈಯಲ್ಲಿ ಹಿಡಿದೊಳೆ
ಕಮಲನಾಭನ ಹೃದಯ
ಕಮಲದಲಿ ನಿಂತವಳೇ
ಕಮಲೇ ನಾ ಕರಮುಗಿವೆ ಬಾಮ್ಮ
ಪೂಜೆಯ ಸ್ವೀಕರಿಸಿ ದಯೆ ತೋರಿಸಮ್ಮ ||2||
ಕಾವೇರಿ ನೀರ ಅಭಿಷೇಕಕ್ಕಾಗಿ ನಿನಗಾಗಿ ನಾ ತಂದೆ ನಮ್ಮ
ಕಂಪನ್ನು ಚೆಲ್ಲೊ ಸುಮರಾಶಿಲಿಂದೆ ಹೂಮಾಲೆ ಕಟ್ಟಿರುವೆ ನಮ್ಮ
ಬಂಗಾರ ಕಾಲ್ಗೆಜ್ಜೆ ನಾದ ನಮ್ಮ ಮನೆಯಲ್ಲ ಬಾ ತುಂಬುವಂತೆ
ಕುಣಿಯುತ... ನಲಿಯುತ... ಒಲಿದು ಬಾ... ನಮ್ಮ ಮನೆಗೆ ಬಾ...
ಕಮಲದ ಮೊಗದೊಳೆ
ಕಮಲದ ಕಣ್ಣೋಳೆ
ಕಮಲವ ಕೈಯಲ್ಲಿ ಹಿಡಿದೊಳೆ
ಶ್ರೀದೇವಿ ಬಾಅಮ್ಮ ಧನಲಕ್ಷ್ಮಿ ಬಾಅಮ್ಮ ಮನೆಯನ್ನು ಬೆಳಕಾಗಿ ಮಾಡು.....
ದಯತೋರಿ ಬಂದು ಮನಸ್ಸಲ್ಲಿ ನಿಂತು ಸಂತೋಷ ಸೌಭಾಗ್ಯ ನೀಡು...
ಸ್ಥಿರವಾಗಿ ಬಂದಿಲ್ಲಿ ನೆಲೆಸು ತಾಯಿ ವರಮಹಾಲಕ್ಷ್ಮಿಯೆ ಹರಸು.....
ಕರವನು ಮುಗಿಯುವೆ ಆರತಿ ಈಗ ಬೆಳಗುವೆ.
ಕಮಲದ ಮೊಗದೊಳೆ
ಕಮಲದ ಕಣ್ಣೋಳೆ
ಕಮಲವ ಕೈಯಲ್ಲಿ ಹಿಡಿದೊಳೆ
ಕಮಲನಾಭನ ಹೃದಯ
ಕಮಲದಲಿ ನಿಂತವಳೇ
ಕಮಲೇ ನಾ ಕರಮುಗಿವೆ ಬಾಮ್ಮ
ಪೂಜೆಯ ಸ್ವೀಕರಿಸಿ ದಯೆ ತೋರಿಸಮ್ಮ ||2||